13 ಕಾರ್ಡ್ ಗೇಮ್ - ಪರಿಚಯ

ಈ ಗೇಮ್ ಇಂಡಿಯನ್ ರಮ್ಮಿ ಗೇಮ್ ಗೆ ಹೆಚ್ಚು ಹೋಲುತ್ತದೆ ಆದರೆ ಇದರಲ್ಲಿ ವ್ಯತ್ಯಾಸವಿದೆ. 13 ಕಾರ್ಡ್ ಇಂಡಿಯನ್ ರಮ್ಮಿ ಗೇಮ್ ಅನ್ನು ತ್ವರಿತವಾಗಿ ಕಲಿಯಬಹುದು ಮತ್ತು ಆಡಲು ಮೋಜುಮಯವಾಗಿದೆ, ಇದನ್ನು ಭಾರತಾದ್ಯಂತ ಹೆಚ್ಚಾಗಿ ಆಡುತ್ತಾರೆ. 13 ಕಾರ್ಡ್ ಗಳ ರಮ್ಮಿ, ಕೌಶಲದ ಗೇಮ್ ಆಗಿದ್ದು, ಆಟಗಾರರ ಮಾನಸಿಕ ಕೌಶಲವನ್ನು ಪರಿಶೀಲಿಸುತ್ತದೆ ಮತ್ತು ವೃದ್ಧಿಸುತ್ತದೆ. ಗೇಮ್ ನ ಫಲಿತಾಂಶವು ಕೌಶಲ ಮತ್ತು ಕಾರ್ಯತಂತ್ರದ ಸಂಯೋಜನೆಯನ್ನು ಅವಲಂಬಿಸಿದೆ. ಆಡುವಾಗ ಗಮನಹರಿಸಿ ಆಡಬೇಕಾದ ಗೇಮ್ ಇದಾಗಿದೆ, ಮತ್ತು ಈ ಗೇಮ್ ಅನ್ನು ತುಂಬಾ ಆಸಕ್ತಿದಾಯಕವಾಗಿಸುತ್ತದೆ.

13 ಕಾರ್ಡ್ ಗೇಮ್ ನ ಪದಗಳು

  • ಕಾರ್ಡ್ ಗಳು: ಈ ಗೇಮ್ ಒಂದು ಪ್ಯಾಕ್ ನಲ್ಲಿರುವ 52 ಕಾರ್ಡ್ ಗಳನ್ನು ಬಳಸುತ್ತದೆ.
  • ಆಟಗಾರರು: ಸಾಮಾನ್ಯವಾಗಿ ಈ ಗೇಮ್ 2 ಜನರ ನಡುವೆ ನಡೆಯುತ್ತದೆ
  • ಜೋಕರ್: ಇಂಡಿಯನ್ ರಮ್ಮಿ ಗೇಮ್ ನಲ್ಲಿ 2 ಜೋಕರ್ ಗಳಿರುವಂತೆ, ಈ ಗೇಮ್ ನಲ್ಲಿ ಕೇವಲ ಒಂದು ಜೋಕರ್ ಮಾತ್ರ ಇರುತ್ತದೆ.

    ಪ್ರತಿ 13 ಕಾರ್ಡುಗಳ ಗೇಮ್ ಪ್ರಾರಂಭವಾಗುವ ಮೊದಲು, ಒಂದು ಕಾರ್ಡ್ ಅನ್ನು ಯಾದೃಚ್ಛಿಕವಾಗಿ ಆಯ್ಕೆಮಾಡಲಾಗುತ್ತದೆ ಮತ್ತು ಈ ಕಾರ್ಡ್ ಅನ್ನು ನಿರ್ದಿಷ್ಟ ಗೇಮ್ ಗೆ ಜೋಕರ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಒಂದು ವೇಳೆ ಹರ್ಟ್ ನ 4 ಸಂಖ್ಯೆಯ ಕಾರ್ಡ್ ಅನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಿದರೆ, ಇತರ 3 ಸೂಟ್ ಗಳ 4 ಸಂಖ್ಯೆಯ ಕಾರ್ಡ್ ಅನ್ನು ಸಹ ಜೋಕರ್ ಎಂದು ಪರಿಗಣಿಸಲಾಗುತ್ತದೆ.

  • ಡೀಲರ್: 13 ಕಾರ್ಡ್ ಗೇಮ್ ನಲ್ಲಿ ಡೀಲರ್ ಅನ್ನು ಲಾಟರಿ ಸಿಸ್ಟಮ್ ಮೂಲಕ ನಿರ್ಧರಿಸಲಾಗುತ್ತದೆ. ಎರಡೂ ಆಟಗಾರರು ಉತ್ತಮವಾಗಿ ಶಫಲ್ ಮಾಡಿರುವ ಕಾರ್ಡ್ ಗಳ ಪ್ಯಾಕ್ ನಿಂದ ಒಂದು ಕಾರ್ಡ್ ಅನ್ನು ಆಯ್ಕೆ ಮಾಡಬೇಕು ಮತ್ತು ಕಡಿಮೆ ಸಂಖ್ಯೆಯ ಕಾರ್ಡ್ ಅನ್ನು ಹೊಂದಿರುವ ಆಟಗಾರನು ಡೀಲರ್ ಆಗುತ್ತಾನೆ. ಶಫಲ್ ಮಾಡಿರುವ ಕಾರ್ಡ್ ಗಳನ್ನು ಅರ್ಧ ಭಾಗವನ್ನಾಗಿ ವಿಭಾಗಿಸಲಾಗುವುದು ಮತ್ತು ತದನಂತರ ಡೀಲರ್ ತನಗೆ ಮತ್ತು ವಿರೋಧಿಗೆ ಕಾರ್ಡ್ ಗಳನ್ನು ವಿತರಿಸುತ್ತಾನೆ.

13 ಕಾರ್ಡ್ ಗೇಮ್ ಅನ್ನು ಆಡುವುದು

ಆಟಗಾರರು ಸೀಕ್ವೆನ್ಸ್ ಗಳನ್ನು ಮತ್ತು/ಅಥವಾ 13 ಕಾರ್ಡ್ ಗಳ ಸೆಟ್ ಅನ್ನು ರಚಿಸಬೇಕಾಗುತ್ತದೆ ಮತ್ತು ರಮ್ಮಿ ಮಾಡಬೇಕಾಗುತ್ತದೆ – ಇದು ಗೇಮ್ ನ ಉದ್ದೇಶವಾಗಿದೆ.

ಮಾನ್ಯ ಸೀಕ್ವೆನ್ಸ್ ನ ಉದಾಹರಣೆ ಅಮಾನ್ಯ ಸೀಕ್ವೆನ್ಸ್ ನ ಉದಾಹರಣೆ
345 345
45678 45678
ಮಾನ್ಯ ಸೆಟ್ ನ ಉದಾಹರಣೆ ಅಮಾನ್ಯ ಸೆಟ್ ನ ಉದಾಹರಣೆ
333

AAA

9999 KKQ

ಅವನು/ಅವಳು ಎಲ್ಲರಿಗಿಂತ ಮೊದಲು ಈ ಗುರಿಯನ್ನು ಸಾಧಿಸಿದರೆ, ಆಟಗಾರನನ್ನು ’ಘೋಷಿಸಿದ್ದಾರೆ” ಎಂದು ಹೇಳಲಾಗುತ್ತದೆ. ಮಾನ್ಯ ಘೋಷಣೆ ಈ ಆಟಗಾರನನ್ನು ನಿರ್ದಿಷ್ಟ ಗೇಮ್ ನ ವಿಜೇತನನ್ನಾಗಿ ಮಾಡುತ್ತದೆ.

ಪ್ರತಿ ಬಾರಿ ಕಾರ್ಡ್ ಅನ್ನು ಕಾರ್ಡ್ ಗಳ ಗುಂಪಿನಿಂದ ಅಥವಾ ಆಟಗಾರರು ಬೇಡವೆಂದು ಬಿಟ್ಟಿರುವ ಕಾರ್ಡ್ ಗಳಿಂದ ತೆಗೆಯಲಾಗುತ್ತದೆ. ಆಟಗಾರರು ಆಯ್ಕೆ ಮಾಡಿದ ಮೊದಲ ಕಾರ್ಡ್, 14ನೇ ಕಾರ್ಡ್ ಆಗಿರುತ್ತದೆ (ಕೈಯಲ್ಲಿರುವ ಕಾರ್ಡ್ ಗಳಿಗೆ ಒಂದನ್ನು ಸೇರಿಸುವುದು). ಈಗ, ಅವನು/ಅವಳು ಈ ಕಾರ್ಡನ್ನು ಎಸೆಯುವುದೋ ಅಥವಾ ಸೀಕ್ವೆನ್ಸ್ ಅಥವಾ ಸೆಟ್ ಗಳನ್ನು ಮಾಡಲು ಕಡಿಮೆ ಅಥವಾ ಯಾವುದೇ ಮೌಲ್ಯವಿಲ್ಲದ ಇತರ ಕಾರ್ಡ್ ಅನ್ನು ಎಸೆಯುವ ಕುರಿತು ಆಟಗಾರನು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದಾಗ್ಯೂ, ಒಬ್ಬ ಆಟಗಾರ ತನ್ನ ವಿರೋಧಿಗೆ ಉಪಯುಕ್ತವಾಗುವ ಕಾರ್ಡ್ ಅನ್ನು ಎಸೆಯಲು ಬಯಸುವುದಿಲ್ಲ. ಆದ್ದರಿಂದ ಬುದ್ಧಿವಂತಿಕೆಯಿಂದ ಆಯ್ಕೆಯನ್ನು ಮಾಡಬೇಕಾಗುತ್ತದೆ. ರಮ್ಮಿಯ 13 ಕಾರ್ಡ್ ಗೇಮ್ ಅನ್ನು ಆಡುವುದು ಹೀಗೆ, ಆಟಗಾರರಲ್ಲಿ ಒಬ್ಬರು ಮಾನ್ಯ ಘೋಷಣೆ ಮಾಡುವವರೆಗೆ ಗೇಮ್ ಮುಂದುವರಿಯುತ್ತದೆ.


 Back to Top